Sunday, January 25, 2009

ಬದುಕು- ಬದಲಾವಣೆ

ಬದಲಾಯಿಸಲು ಬಯಸುವೆಯ ಪ್ರಿಯೆ ನನ್ನ
ನಿನ್ನದದೆಷ್ಟು ಕಾಳಜಿ, ಕಂಡರೆ ನನ್ನ
ನಿನ್ನ ಕಂಗಳಲಿ ನಾ ಕಂಡೆ
ಆಸೆಯ ಅಮ್ಮನ ಬಿಂಬ
ಅಕ್ಕರೆಯ ಅಕ್ಕನ ಬಿಂಬ
ನಲ್ಮೆಯ ಗೆಳತಿಯ ಬಿಂಬ
ಕೊನೆಯಲ್ಲೂ ಕಾಣಲಿಲ್ಲ ನನ್ನ ಪ್ರತಿಬಿಂಬ

ನನ್ನ ಆ ಪ್ರತಿ ಸ್ಪರ್ಶ
ತರಲಿಲ್ಲವೆ ನಿನ್ನಲಿ ಹರ್ಷ
ನನ್ನ ನಲ್ಮೆಯ ನುಡಿ
ತಲುಪಲೇ ಇಲ್ಲ ನಿನ್ನ ಹೃದಯದ ಬಳಿ

ಹರ್ಷ ತರದ ಸ್ಪರ್ಶ
ಆನಂದ ನೀಡದ ಅಂದ
ಹೃದಯ ತಲುಪದ ನುಡಿ
ಇದ್ದರೆಸ್ಟು ಗೆಳತಿ

ನೀನಾಗಲಾರೆಯೇನೋ ನನ್ನ ಸಂಗಾತಿ
- ಹೇಳು ಗೆಳತಿ

ಮನದುಂಬಿ ನುಡಿದ ನಲ್ಮೆಯ ನೀಡಿ
ಪುತಿಯಿಸಲಿಲ್ಲ ಹರ್ಷದ ಕಾರಂಜಿ
ಅರಳಲಿಲ್ಲ ನಿನ್ನ ಮೊಗ ನಗು ತುಂಬಿ
ಬಾಳು ಬರಡಾಗುವ ಮೊದಲು
ಅರಸಬಾರದೆ ಪ್ರಿಯೆ
ಪ್ರೀತಿಯ ಚಿಲುಮೆಯ, ಹೊಸ ಹಾದಿಯ!!

ಗುರಿಯಿಲ್ಲದಂಬಿಗೆ ದಾರಿ ಬೇಕೇನು?

No comments:

Post a Comment