Sunday, January 25, 2009

ಅಮ್ಮ

ನನ್ನ ಪ್ರೀತಿಯ ಅಮ್ಮ
ನಿನಗದೆಷ್ಟು ಕಾಳಜಿ ಕಂಡರೆ ನನ್ನ
ನಿನ್ನ ಅಪ್ಪುಗೆಯ ಬಿಸಿಯಲ್ಲಿ, ಪ್ರೇಮದಾ ಕಾರಂಜಿ

ನಿನ್ನನ್ನು ನೆನೆಸಿದ್ದೆ ಮಾ ಮನ ತುಂಬಿ

ಮೈ ಮನವೆಲ್ಲ ಪುಳಕ ಕಂಡು ನಿನ್ನ
ಬಹಳ ದಿನಗಳ ಬಳಿಕ ಭೇಟಿಯಾದರೆ ನಿನ್ನ

ನಿನ್ನದದೆಷ್ಟು ಪ್ರೀತಿ ಅಮ್ಮ
ಸಾಗರಗಳ ಆಚೆಯಲ್ಲೂ ಮರೆಯಲಾರೆನಮ್ಮ

ನಿನ್ನ ಬೆಚ್ಚನೆಯ ಕೈ ಹಿಡಿತದ ಸ್ಪರ್ಶ
ಆತ್ಮಾಭಿಮಾನ ಮೂಡಿಸುವ ಆ ಹರ್ಷ
ನಿನ್ನ ಮಾತಿನ ಬಿಸುಪು
ಸಾಧನೆಯ ಹಾದಿಯನು ತೋರಿಸುತಲಿಹುದು

ಸಾಧಿಸಿದ ಮಗನನ್ನು ಹೊಗಳುವಾ ಪರಿ
ಇನ್ನೊಂದು ಸಾಧನೆಗೆ ತೋರಿಹುದು ದಾರಿ

ನೋವಿರಲಿ, ನಲಿವಿರಲಿ
ನಗುವ ಪಾಠವಾ ಕಲಿಸಿದಾ ನೀನು
ಬಾನಿಗಿಂತ ಎತ್ತರ ಬೆಳೆದಿಲ್ಲವೇನು?

No comments:

Post a Comment