Sunday, January 25, 2009

My Visit to Film city. :)


Campus selection

ಕಂಗಳು ಹನಿಗೂಡಿ ದ್ರವಿಸಿದ ಮನ
ಕಂಪನಿಯಲಿ ಕೆಲಸ ಗಿಟ್ಟಿಸಲಾರದ ಕ್ಷಣ

ಮನವೆಲ್ಲ ಮಸಣ!!

ಆಗಸಕೆರಿದ್ದ ಮನ
ಇಳೆಗೆ ಇಳಿದ ಕ್ಷಣ

ಬರದು ಮನದಲ್ಲೂ ಆರದ ಚೇತನ

ಕಷ್ಟದಲ್ಲಿ ಸಹನೆಯಿಂದಿದ್ದ ಮಾಗಿದ ಮನ
ಸಾಧಿಸುವ ಛಲ ಬಿಡಲಾರೆನೆಂದಿತ್ತು
ಬಿಡಲಾರದ ಬಿಂಕದೆಮ್ಬಂತಿತ್ತು

ಮುಸುಕ ಕಿತ್ತೆಸೆದು
ಮೆರೆಗಳ ಮೀರಿ
ತೋರಿಹುದು ಸಾಧನೆಯ ದಾರಿ

ಶ್ರದ್ಧೆಯಲಿ ಮನವಿಟ್ಟು ಮಾಡಿರುವ ಕಾರ್ಯ
ತೋರದೆ ಉಳಿಯುವಡೆ ಒಳ್ಳೆಯ ದಾರಿಯ

ಛಲವೆನ್ನ ಬಲವೆಂದು ನುಗ್ಗುವೇನು ಮುಂದೆ!!
ಇನ್ನೆಂದು ನೋಡದೆಯೆ , ನೋಡದೆಯೇ ಹಿಂದೆ.

ಅಮ್ಮ

ನನ್ನ ಪ್ರೀತಿಯ ಅಮ್ಮ
ನಿನಗದೆಷ್ಟು ಕಾಳಜಿ ಕಂಡರೆ ನನ್ನ
ನಿನ್ನ ಅಪ್ಪುಗೆಯ ಬಿಸಿಯಲ್ಲಿ, ಪ್ರೇಮದಾ ಕಾರಂಜಿ

ನಿನ್ನನ್ನು ನೆನೆಸಿದ್ದೆ ಮಾ ಮನ ತುಂಬಿ

ಮೈ ಮನವೆಲ್ಲ ಪುಳಕ ಕಂಡು ನಿನ್ನ
ಬಹಳ ದಿನಗಳ ಬಳಿಕ ಭೇಟಿಯಾದರೆ ನಿನ್ನ

ನಿನ್ನದದೆಷ್ಟು ಪ್ರೀತಿ ಅಮ್ಮ
ಸಾಗರಗಳ ಆಚೆಯಲ್ಲೂ ಮರೆಯಲಾರೆನಮ್ಮ

ನಿನ್ನ ಬೆಚ್ಚನೆಯ ಕೈ ಹಿಡಿತದ ಸ್ಪರ್ಶ
ಆತ್ಮಾಭಿಮಾನ ಮೂಡಿಸುವ ಆ ಹರ್ಷ
ನಿನ್ನ ಮಾತಿನ ಬಿಸುಪು
ಸಾಧನೆಯ ಹಾದಿಯನು ತೋರಿಸುತಲಿಹುದು

ಸಾಧಿಸಿದ ಮಗನನ್ನು ಹೊಗಳುವಾ ಪರಿ
ಇನ್ನೊಂದು ಸಾಧನೆಗೆ ತೋರಿಹುದು ದಾರಿ

ನೋವಿರಲಿ, ನಲಿವಿರಲಿ
ನಗುವ ಪಾಠವಾ ಕಲಿಸಿದಾ ನೀನು
ಬಾನಿಗಿಂತ ಎತ್ತರ ಬೆಳೆದಿಲ್ಲವೇನು?

ಬದುಕು- ಬದಲಾವಣೆ

ಬದಲಾಯಿಸಲು ಬಯಸುವೆಯ ಪ್ರಿಯೆ ನನ್ನ
ನಿನ್ನದದೆಷ್ಟು ಕಾಳಜಿ, ಕಂಡರೆ ನನ್ನ
ನಿನ್ನ ಕಂಗಳಲಿ ನಾ ಕಂಡೆ
ಆಸೆಯ ಅಮ್ಮನ ಬಿಂಬ
ಅಕ್ಕರೆಯ ಅಕ್ಕನ ಬಿಂಬ
ನಲ್ಮೆಯ ಗೆಳತಿಯ ಬಿಂಬ
ಕೊನೆಯಲ್ಲೂ ಕಾಣಲಿಲ್ಲ ನನ್ನ ಪ್ರತಿಬಿಂಬ

ನನ್ನ ಆ ಪ್ರತಿ ಸ್ಪರ್ಶ
ತರಲಿಲ್ಲವೆ ನಿನ್ನಲಿ ಹರ್ಷ
ನನ್ನ ನಲ್ಮೆಯ ನುಡಿ
ತಲುಪಲೇ ಇಲ್ಲ ನಿನ್ನ ಹೃದಯದ ಬಳಿ

ಹರ್ಷ ತರದ ಸ್ಪರ್ಶ
ಆನಂದ ನೀಡದ ಅಂದ
ಹೃದಯ ತಲುಪದ ನುಡಿ
ಇದ್ದರೆಸ್ಟು ಗೆಳತಿ

ನೀನಾಗಲಾರೆಯೇನೋ ನನ್ನ ಸಂಗಾತಿ
- ಹೇಳು ಗೆಳತಿ

ಮನದುಂಬಿ ನುಡಿದ ನಲ್ಮೆಯ ನೀಡಿ
ಪುತಿಯಿಸಲಿಲ್ಲ ಹರ್ಷದ ಕಾರಂಜಿ
ಅರಳಲಿಲ್ಲ ನಿನ್ನ ಮೊಗ ನಗು ತುಂಬಿ
ಬಾಳು ಬರಡಾಗುವ ಮೊದಲು
ಅರಸಬಾರದೆ ಪ್ರಿಯೆ
ಪ್ರೀತಿಯ ಚಿಲುಮೆಯ, ಹೊಸ ಹಾದಿಯ!!

ಗುರಿಯಿಲ್ಲದಂಬಿಗೆ ದಾರಿ ಬೇಕೇನು?
ನಲ್ಲೆಯ ಮುಖಾರವಿಂದ
ಅಮಾವಾಸ್ಯೆಯ ಇರುಳು
ಎಲ್ಲೆಲ್ಲು ತಿಂಗಳ ಬೆಳಕು
ನೀ ಮನೆಯಲಿರಲಿಲ್ಲ ನಲ್ಲೆ

ಕಳೆದು ಹೋದ ನಲ್ಲೆ
ನಿನ್ನ ಕಣ್ಣಂಚಿನಿಂದ ಉದುರಿದ ಮುತ್ತು ನೀರಾಗಬಾರದಿತ್ತೆ
ನನ್ನೆದೆಯ ಕಿಚ್ಚ ತಣಿಸಿ
ಮುತ್ತೆಲ್ಲ ಕರಗಿ ನೀರಾಗುವ ಕ್ಷಣ
ನನ್ನೆದೆಯಲ್ಲ ಮಸಣ
ನೀನಿದ್ದೆ ಬಾಹುವಿನಲ್ಲಿ ಪರಪುರುಷನ.

ಜೀವನ
ಹೃದಯದಾ ಪುಟಗಳಲಿ ನಿನ್ನದೇ ಚಿತ್ರ
ನನ್ನ ಚಿತ್ತವೋ ನಿನ್ನತ್ತ
ಮನಸೆಲ್ಲ ಬರಿ ಕವನ
ನೀ ಕಂಡಾಗ ಹೊಸ ಚೇತನ
ನಿನ್ನ ನೆನಹುಗಳಲೇ ಈ ಜೀವನ

ನಿಮಗೊಂದು ಸವಾಲ್
-- ಕವನ ಪೂರ್ತಿ ಮಾಡಿ
ಉರಿ ಬಿಸಿಲು ಉರಿಯಾಗಿ ನನ್ನೆದೆಯೊಳಗೆ ಹೊತ್ತುರಿವಾಗ
ಮರುಭೂಮಿಯಲಿ ದೊರೆತ ಜಲಸಿರಿಯು ನೀ ಬೆಡಗಿ
--- ಮುಂದೇನು ?

Saturday, January 24, 2009

ಪ್ರೇಮ ಕಾರಂಜಿ

ಮುಂಜಾನೆಯ ಸವಿಗನಸು
ಮೇಲೆ ನೋಡಿದಾಗ ಅಂದುಕೊಂಡೆ
ಎಲ್ಲೋ ನೋಡಿದಂತಿದೆಯಲ್ಲ,
ಚುಕ್ಕೆಗಳು, ನಕ್ಷತ್ರಗಳು
ಆ ನಿನ್ನ ಕಂಗಳು
ಮುದ್ದಾದ ಗುಲಾಬಿ ಹೂ
ಚುಂಬಿಸಬೇಕೆನಿಸುವದಲ್ಲ
ಪಚ್ಚೆ ನೆಲದ ಹಾಸು
ನೀಲಾಗಸದ ಹೊದಿಕೆ
ಸವಿನಿದ್ದೆ

ಕನಸು
ಕನಸೆಲ್ಲ ನೀರಾದ ಮೇಲೆ
ಉಳಿದಿದ್ದು ಬರಿ ಈ ಓಲೆ
ಮಕರಂದವನರಸುವ ಮಧುಕರನಾದೆಯೆಲೆ
ಊ ಹೂವೆ
---
ಬಹುಷಃ ಈ ಕವನದ ಅರ್ಥವನು ನಾನು ಹೇಳುವುದು ಉತ್ತಮ
ನನ್ನ ಗೆಳೆಯನ ಗೆಳತಿ ಅವನ ಬಿಟ್ಟು ಹೊಸ ಕನಸಿನ ಹಿಂದೆ ಹೋದ ಕಥೆಯಿದು.
ಅವನ ಬಳಿ ಕೊನೆಯಲ್ಲಿ ಉಳಿದಿದ್ದು ಅವಳು ಬರೆದ ಓಲೆ ಅಷ್ಟೆ.
ಮಕರಂದವನು ಹುಡುಕುವ ದುಂಬಿಯಂತೆ ತನ್ನನ್ನು ಬಿಟ್ಟು ಹೋದ ಬಗ್ಗೆ ಆತನ ಬೇಸರವನ್ನು ಕವನದಲ್ಲಿ ಬರೆಯುವ ಪ್ರಯತ್ನ ಮಾಡಿರುವೆನು ಹೀಗೆ.

ಮೊದಲ ತೊದಲು

ಮಂಗ-ಮಾನವ
ಕತ್ತೆ ತಿಳಿದಿತ್ತು ನಾ ಕೂಗಬಲ್ಲೆ
ನಾಯಿ ತಿಳಿದಿತ್ತು ನಾ ಬೊಗಳಬಲ್ಲೆ
ಮಾನವ ಎಲ್ಲವನು ತಿಳಿದಿದ್ದ
ಕತ್ತೆಗೆ ನಾಯಿಗೆ ಒದೆಯುವಾದ, ಕಚ್ಚುವದ ಕಲಿಸಿದ್ದ
ತನ್ನ ಮೂರ್ಖತನವನು ಜಗದೆಲ್ಲೆಡೆ ಮೆರೆದಿದ್ದ
ಸಾಮರಸ್ಯದ ಪಾಠವನು ಮರೆತಿದ್ದ
ಕೋತಿಯಿಂದ ತಾ ಬಂದೆನೆಂದು ಜಗಕೆಲ್ಲ ಸಾರಿ ಹೇಳಿ
ಕೋತಿಗಿಂತ ಕೀಳಾಗಿದ್ದ.

ರಾಜಕಾರಣಿ
ಮಾನವನೆಂದ ತಾ ಬಂದೆ ಮಂಗನಿಂದ
ಕೆಲವರು ಚಿಂತಿಸಬಹುದು ಹೀಗೆಂದು
ಈ ರಾಜಕಾರಣಿ ಎಲ್ಲಿಂದ ಬಂದ
ಉಳಿದವರು ಹೇಳಬಹುದು, ಬುಧ, ಶುಕ್ರ ಮಂಗಳನಿಂದ
ನೆಪ್ಚೂನ್, ಪ್ಲೂಟೋ, ದೂರದಿಂದ!!
ಯಾರೇನೆ ಅಂದರೂ ನಾನೋಪ್ಪಲಾರೆ
ಆತ ಬಂದಿದ್ದು ಶನಿಯಿಂದ

Todalu nudi

The Sunday was a cool day. After a lot of time, with busy schedule and hard work, finally got some time to look at my old poems.

Many a times, It brings a smile on my face when I look at the usage of words in those poems.
They are neither sophisticated nor fine tuned. It is just a passion to write poems, never matter how they sound. :)

So, thought of collecting all of them and put them across.

But If I really look at the poems I am writing now a days, I can see a lot of improvement. :)

Would appreciate if you provide your valuable suggestions.

So, Here it goes.