Saturday, May 16, 2009

ಇವುಗಳಲ್ಲಿ ಬಹಳಷ್ಟು ನಾನು ಕಾಲೇಜು ಓದುತ್ತಿರುವಾಗ ರಚಿಸಿದ್ದು.. ನನ್ನ ಸ್ನೇಹಿತರ ಮನದಂತರಾಳದ, ನನ್ನ ಜೊತೆಗೆ ಹಂಚಿಕೊಂಡ personal ಅನ್ನೋ ವಿಷಯಗಳನ್ನು, ಸಾಹಿತ್ಯದ ಮೆರಗು ನೀಡಿ, ಅವರಿಗೆ ನೀಡಿದ್ದೆ.. ಅದು ಒಂದು ರೀತಿಯ ಖುಷಿ, ನೆಮ್ಮದಿ ಅವರಿಗೆ ಕೊಟ್ಟಿದೆ ಅಂತ ನನ್ನ ಎಸ್ಟೋ ಜನ friends ಹೇಳ್ತಾರೆ.. ಇದರಲ್ಲಿ, ಲೈಫ್ ನ ಬಗ್ಗೆ negative emotions ಕೆಲವೊಂದು ಕಡೆ ವ್ಯಕ್ತವಾಗಬಹುದು. ಆದರೆ ಜೀವನ ಅನ್ನೋ ಸುಂದರ ಚಿತ್ತಾರ ಇವೆಲ್ಲವುಗಳಿಂದನೆ ಶ್ರೀಮಂತ ಆಗುತ್ತೆ ಅನ್ನೋದು ನನ್ನ ಭಾವನೆ. :).

ಪ್ರಿಯ ಸ್ನೇಹಿತರೇ, ನಾನು ಕನ್ನಡ ಪ್ರಚಾರಕ್ಕೆ ಅಂತ ಏನು ಬರೆಯೋಕೆ ಶುರು ಮಾಡಿರೋ ವ್ಯಕ್ತಿ ಅಲ್ಲ.
ಮನದ ಭಾವನೆಗಳು, ನನ್ನ ಗೆಳೆಯರ ಸಂಕಟಗಳು, ಒಂದು ಅವ್ಯಕ್ತ ವಾದಂತಹ ಸುಂದರ ಸ್ನೇಹ, ನನ್ನಲ್ಲಿ ಕವನಗಳನ್ನ ಹುಟ್ಟು ಹಾಕಿತು. ಕವನ ಅಥವ ಕವಿತೆ ಅನ್ನೋದು ಒಂದು ಭಾವನೆಯೆ ಚಿಲುಮೆ, ಅದು ಹೊರ ಚಿಮ್ಮಲು ಕನ್ನಡಕ್ಕಿಂತ ಸುಂದರವಾದ, ಶ್ರೀಮಂತವಾದ , ಮನಸ್ಸಿಗೆ ತುಂಬಾ ಹತ್ತಿರವಾದ ಭಾಷೆ ಇನ್ನೊಂದು ಇರಲಾರದು ಅನ್ನಿಸ್ತು. ಅದಿಕ್ಕೆ ನಿಮ್ಮ ಮಡಿಲಿಗೆ ಈ ಕವನ ಗುಚ್ಚವನ್ನು ಹಾಕ್ತಾ ಇದ್ದೇನೆ, ನಿಮ್ಮ ಅಭಿ "ಪ್ರಾಯ" ತಿಳಿಸಿ ;)

No comments:

Post a Comment